ಭಾರತೀಯ ಸಿನಿಮಾಗೆ ಆಸ್ಕರ್.. ಹೊಸ ತಲೆಮಾರಿಗೆ ಇದು ಸ್ಫೂರ್ತಿ: ನಟ ಅನುಪಮ್ ಖೇರ್ ಸಂತಸ
🎬 Watch Now: Feature Video
ಬೋಲ್ಪುರ್ (ಪಶ್ಚಿಮ ಬಂಗಾಳ): 2023ರ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವುದಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಹರ್ಷ ವ್ಯಕ್ತಪಡಿಸಿದ್ದಾರೆ. ಸೋಮವಾರ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಗೆ ಬಂದಿದ್ದ ನಟ ಈ ವೇಳೆ ಆರ್ಆರ್ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ತಂಡವನ್ನು ಅಭಿನಂದಿಸಿದ್ದಾರೆ. ಈ ಪ್ರಶಸ್ತಿಯು ಹೊಸ ತಲೆಮಾರಿನ ಚಲನಚಿತ್ರ ನಿರ್ಮಾಪಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ವಿಶ್ವಭಾರತಿಯ ಲಿಪಿಕಾ ರಂಗಮಂದಿರದಲ್ಲಿ 57ನೇ ಉಪನ್ಯಾಸ ಮಾಲಿಕೆ ನಡೆಯುತ್ತಿದೆ. ಈ ವೇಳೆ ನಟ ಬೋಲ್ಪುರ್ ತಲುಪಿ ಶಾಂತಿನಿಕೇತನ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಸಮಯದಲ್ಲೂ ಖೇರ್ ಆಸ್ಕರ್ ಸಾಧನೆಯನ್ನು ಕೊಂಡಾಡಿದ್ದಾರೆ. "ಭಾರತದ ಆಸ್ಕರ್ ಪ್ರಶಸ್ತಿಯ ಬಗ್ಗೆ ನನಗೆ ಸಂತೋಷವಾಗಿದೆ. ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಭಾರತೀಯರಿಗೆ ಇದು ಬಹಳ ಸಂತಸದ ಸುದ್ದಿ ಮತ್ತು ಹೊಸ ಚಿತ್ರ ನಿರ್ಮಾಪಕರಿಗೆ ಸ್ಫೂರ್ತಿದಾಯಕವಾಗಿದೆ. ಬಂಗಾಳದಲ್ಲಿ ಅನೇಕ ಪ್ರತಿಭಾವಂತ ಚಲನಚಿತ್ರ ನಿರ್ಮಾಪಕರಿದ್ದಾರೆ. ಅಂತಹವರಿಗೆ ಇದು ಮಾದರಿಯಾಗಿದೆ" ಎಂದು ನುಡಿದರು.
ಆಸ್ಕರ್ ಸಾಧನೆಗಾಗಿ ಕಾಶ್ಮೀರಿ ಫೈಲ್ಸ್ ನಟ ಆರ್ಆರ್ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್‌ನ ಸಂಪೂರ್ಣ ತಂಡವನ್ನು ಅಭಿನಂದಿಸಿದ್ದಾರೆ. ಎಸ್ ಎಸ್ ರಾಜಮೌಳಿ, ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಜೊತೆಗೆ ಗುಣೀತ್ ಮೊಂಗಾ ಮತ್ತು ಕಾರ್ತಿಕಿ ಗೊನ್ಸಾಲ್ವೆಸ್ ಅವರನ್ನು ಕೊಂಡಾಡಿದ್ದಾರೆ. "ನಾನು ಅವರಿಗೆ ವಂದಿಸಲು ಬಯಸುತ್ತೇನೆ. ಅವರು ದೇಶಕ್ಕೆ ದೊಡ್ಡ ಗೌರವವನ್ನು ತಂದಿದ್ದಾರೆ" ಎಂದು ಅನುಪಮ್ ಖೇರ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: 'ದ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?