ಯಾರ ಸಹಾಯವೂ ಇಲ್ಲದೆ ಮತಗಟ್ಟೆಗೆ ಬಂದು ವೋಟ್ ಹಾಕಿದ 104 ವರ್ಷದ ಅಜ್ಜ - ೧೦೪ ವರ್ಷದ ಅಜ್ಜ ಮತದಾನ ಮಾಡಿ ಮಾದರಿ ಯಾದರು.
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-3039675-thumbnail-3x2-lekjpg.jpg)
ಅಯ್ಯೋ ಭಾರಿ ಬಿಸಿಲು, ಮಳೆ ಬರೋ ಹಾಗಿದೆ, ಇನ್ನೂ ಟೈಮಿದೆ ಆಮೇಲೆ ಹೋಗಿ ಮತ ಹಾಕಿದ್ರಾಯಿತು ಎಂದು ಮನೆಯಲ್ಲೇ ಕುಳಿತುಕೊಳ್ಳುವವರೇ ಹೆಚ್ಚು. ಇನ್ನೂ ಕೆಲವರು ಹಕ್ಕು ಚಲಾಯಿಸಲು ಮುಂದಾಗುವುದಿಲ್ಲ. ಇಂತವರ ಮಧ್ಯೆ ಮೈಸೂರಿನಲ್ಲಿ 104ರ ಇಳಿವಯಸ್ಸಿನ ವೃದ್ಧನೋರ್ವ ನನ್ನ ಮತ, ನನ್ನ ಹಕ್ಕು. ಎನ್ನುತ್ತ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಅಗ್ರಹಾರದ ನಿವಾಸಿ ವೀರಣ್ಣ ಆರಾಧ್ಯ ಯಾರ ಸಹಾಯವನ್ನೂ ಪಡೆಯದೇ ಮತ ಹಾಕಿದರು. ನಂತರ ಮಾತನಾಡಿದ ಅವರು, ನನಗೆ 104 ವರ್ಷ ವಯಸ್ಸಾಗಿದೆ. ನಾನು ನನ್ನ ಮತ ಚಲಾಯಿಸಿದ್ದೇನೆ. ನೀವೂ ತಪ್ಪದೇ ಮತ ಹಾಕಿ ಎಂದು ಯುವಕರಿಗೆ ಕರೆ ನೀಡಿದರು.