ಪಾಸ್ ದರ ಏರಿಕೆಯ ಬರೆ... ಬಿಎಂಟಿಸಿ ವಿರುದ್ಧ ಪ್ರಯಾಣಿಕರ ಆಕ್ರೋಶ - ಬಿಎಂಟಿಸಿ ಬಸ್ ಪಾಸ್ ದರ ಹೆಚ್ಚಳಕ್ಕೆ ಪ್ರಯಾಣಿಕರು ಆಕ್ರೋಶ
🎬 Watch Now: Feature Video

ಬೆಂಗಳೂರು: ಸಿಲಿಕಾನ್ ಸಿಟಿಯ ಬಹುತೇಕ ಬಿಎಂಟಿಸಿ ಬಸ್ಗಳು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿವೆ. ಆದ್ರೆ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಪ್ರತಿನಿತ್ಯ 5 ರೂ., 17 ರೂ., 24 ರೂಪಾಯಿಯಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಇದೀಗ 70 ರೂಪಾಯಿ ಪಾಸ್ ಪಡೆಯಬೇಕು. ಇದರಿಂದ ಅನ್ಯಾಯವಾಗುತ್ತಿದೆ. ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ಮನೆಯಲ್ಲೇ ಇದ್ದು, ಇದೀಗ ದರ ಹೆಚ್ಚಳ ಮಾಡಿರುವುದು ಅನ್ಯಾಯ ಎಂದು ಕಿಡಿಕಾರಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಜನರು ಮಾತನಾಡಿದ್ದಾರೆ.