ಹೆಣ್ಣು ಮಕ್ಕಳ ದಿನಾಚರಣೆ: ಲಂಬಾಣಿ ಸಮುದಾಯದ ಯುವತಿಯರಿಂದ ಭತ್ತದ ವಿಶೇಷ ಮಾದರಿ - ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
🎬 Watch Now: Feature Video
ಗಂಗಾವತಿ: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ತಾಲೂಕಿನ ಶ್ರೀರಾಮನಗರದಲ್ಲಿ ವಿಭಿನ್ನವಾಗಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಜಾಥಾಗೆ ಕಲಾಮೇಳ ತಂಡಗಳು ಮೆರಗು ನೀಡಿದವು. ಲಂಬಾಣಿ ಸಮುದಾಯದ ಯುವತಿಯರು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಣ್ಣು ಹಾಕಿ ಅದರಲ್ಲಿ ಹ್ಯಾಪಿ ಚೈಲ್ಡ್ ಗರ್ಲ್ ಡೇ ಎಂದು ಭತ್ತದ ಸಸಿಗಳನ್ನು ನಾಟಿ ಮಾಡಿ ಗಮನ ಸೆಳೆದರು. ಅಲ್ಲದೆ ಗ್ರಾಮದ ವಿವಿಧ ಶಾಲೆಯ ಶಿಕ್ಷಕರು, ಹೆಣ್ಣು ಮಕ್ಕಳು, ಮಹಿಳೆಯರು ಜಾಥಾದಲ್ಲಿ ಭಾಗಿಯಾದರು. ತಾಲೂಕು ಪಂಚಾಯಿತಿ ಇಒ ಮೋಹನ್ ಹಾಗೂ ಪಂಚಾಯಿತಿ ಪಿಡಿಒ ವತ್ಸಲಾ ನೇತೃತ್ವವಹಿಸಿದ್ದರು.