ಬೆಂಗಳೂರಲ್ಲಿ ಕೆಎಸ್​​ಆರ್​ಟಿಸಿ ಬಸ್​​ಗಳು ಖಾಲಿ ಖಾಲಿ... ಕೊರೊನಾಗೆ ಹೆದರಿದ್ರಾ ಜನ?

By

Published : May 21, 2020, 10:59 AM IST

thumbnail
ಬೆಂಗಳೂರು: ಮೂರನೇ ದಿನವೂ ಸಹ ಕೆಎಸ್​ಆರ್​ಟಿಸಿ ಬಸ್ ಸೇವೆ ಆರಂಭವಾಗಿದ್ದು, ಮೂರು ಸಾವಿರ ಬಸ್​ಗಳನ್ನ ಓಡಿಸಲು ನಿಗಮ ನಿರ್ಧಾರ ಮಾಡಿದೆ. ಮುಂಜಾನೆ 7 ಗಂಟೆಯಿಂದ ಬಸ್​ ವ್ಯವಸ್ಥೆ ಇದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೊದಲ ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಬಿಡಲಾಗಿತ್ತು. ಹೀಗಾಗಿ ಮೇ 19ರಂದು 1,606 ಬಸ್​ಗಳಲ್ಲಿ 53,506 ಪ್ರಯಾಣಿಕರು, ಮೇ 20ರಂದು 2,633 ಬಸ್ ಮತ್ತು 81,593 ಪ್ರಯಾಣಿಕರು ಸಂಚಾರ ಮಾಡಿದ್ದರು. ಆದರೆ ಇಂದು ಮುಂಜಾನೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.