ಬೆಳಗಾವಿ ಜಿಲ್ಲೆಯಲ್ಲಿ 9 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ವದಂತಿ: ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ - DC Dr. S.B. Bommanahalli statement
🎬 Watch Now: Feature Video
ಬೆಳಗಾವಿ: ಜಿಲ್ಲೆಯಲ್ಲಿ 9 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಬಗ್ಗೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ಈ ಸುದ್ದಿಯು ಸತ್ಯಕ್ಕೆ ದೂರವಾದದ್ದು. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಚೀನಾ ಹಾಗೂ ಇತರೆ ದೇಶಗಳಿಂದ ಈವರೆಗೆ ಬೆಳಗಾವಿ ಜಿಲ್ಲೆಗೆ ಒಟ್ಟು 9 ಮಂದಿ ಮರಳಿ ಬಂದಿದ್ದು, ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಇವರಲ್ಲಿ ಕೊರೊನಾ ರೋಗಲಕ್ಷಣಗಳು ವರದಿಯಾಗಿಲ್ಲ. ಇಬ್ಬರನ್ನು ಈಗಾಗಲೇ 28 ದಿನಗಳವರೆಗೆ ನಿರಂತರವಾಗಿ ತಪಾಸಣೆ ಮಾಡಲಾಗಿರುತ್ತದೆ. ಉಳಿದ 7 ಮಂದಿಯನ್ನು ಮುಂದಿನ 28 ದಿನಗಳವರೆಗೆ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.