ದತ್ತ ಜಯಂತಿ: ಚಿಕ್ಕಮಗಳೂರಿನಲ್ಲಿ ವಿಎಚ್ಪಿ,ಭಜರಂಗದಳ ಕಾರ್ಯಕರ್ತರಿಂದ ಬೈಕ್ ಜಾಥಾ - ಚಿಕ್ಕಮಗಳೂರು ದತ್ತ ಜಯಂತಿ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5299973-thumbnail-3x2-net.jpg)
ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಹಿನ್ನಲೆ ವಿಎಚ್ಪಿ ಮತ್ತು ಭಜರಂಗದಳ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು. ನಗರದ ಶ್ರೀರಾಮ ದೇವಾಸ್ಥಾನದಿಂದ ಆರಂಭಿಸಿ ರತ್ನಗಿರಿ ರಸ್ತೆ ಮೂಲಕ ಬಸವನಹಳ್ಳಿ ರಸ್ತೆ, ಐಜಿ ರಸ್ತೆಯ ಮೂಲಕ ರಾಮೇಶ್ವರ ದೇವಸ್ಥಾನದವರೆಗೆ ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ನೂರಾರು ವಿಎಚ್ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಭಾಗಿಯಾಗಿ ಬೈಕ್‌ಗಳಲ್ಲಿ ಭಗವಧ್ವಜ ಹಾರಿಸುವ ಮೂಲಕ ಘೋಷಣೆಗಳನ್ನು ಕೂಗುತ್ತಾ ದತ್ತ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.