ಲೋಕಸಭಾ ಚುನಾವಣೆ ಹಿನ್ನಲೆ: ರಾಯಚೂರಿನಲ್ಲಿ ಪೊಲೀಸ್ ಪರೇಡ್ - undefined
🎬 Watch Now: Feature Video

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಯಚೂರಿನ ಎಸ್ಪಿ ಡಾ.ಡಿ.ಕಿಶೋರ್ ಬಾಬು ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ನಗರದ ಜಿಲ್ಲಾವರಿಷ್ಠಾಧಿಕಾರಿ ಕಚೇರಿಂದ ಪ್ರಾರಂಭವಾದ ಈ ಪರೇಡ್, ನಗರದ ಗಂಜ್ ರೋಡ್, ಚಂದ್ರಮೌಳೇಶ್ವರ ಸರ್ಕಲ್, ತೀನ್ ಕಂದೀಲ್, ಮಹಾವೀರ ಚೌಕ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲಾಯಿತು. ಸದರ್ ಬಜಾರ್ ಹತ್ತಿರ ಪೊಲೀಸರ ಪರೇಡ್ ಬರುತ್ತಿದ್ದಂತೆ ಹೂಗಳನ್ನ ಹಾಕುವ ಮೂಲಕ ವಿಶೇಷವಾಗಿ ಗೌರವಿಸಲಾಯಿತು. ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕರು ಯಾವುದೇ ಭಯಕ್ಕೆ ಒಳಗಾಗದೇ ಮುಕ್ತವಾಗಿ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿ ಎನ್ನುವ ಸಂದೇಶ ಸಾರುವ ಮೂಲಕ ಅಹಿತಕರ ಘಟನೆ ನಡೆಸುವವರಿಗೆ ಎಚ್ಚರಿಕೆ ನೀಡಲಾಯಿತು.