ಲಿಫ್ಟ್ನಲ್ಲಿ ಕುತ್ತಿಗೆಗೆ ಹಗ್ಗ ಸಿಕ್ಕಿ ಹಾಕಿಕೊಂಡು ಬಾಲಕನ ಒದ್ದಾಟ: ಬೆಚ್ಚಿಬೀಳಿಸುವ ವಿಡಿಯೋ ವೈರಲ್ - today breaking news
🎬 Watch Now: Feature Video
ಬೆಂಗಳೂರು: ಅಪಾರ್ಟ್ಮೆಂಟ್ನ ಲಿಫ್ಟ್ನಲ್ಲಿ ಮೂರು ಮಕ್ಕಳು ಹಗ್ಗದಲ್ಲಿ ಆಟವಾಡುತ್ತಾ ಲಿಫ್ಟ್ ಒಳಗಡೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಬಾಲಕನೊಬ್ಬ ಕೈಯಲ್ಲಿ ಹಗ್ಗ ಹಿಡಿದುಕೊಂಡು ಲಿಫ್ಟ್ ಒಳಗಡೆ ಹೋಗಿ ಹಗ್ಗ ಎಳೆದಿದ್ದಾನೆ. ತಕ್ಷಣ ಲಿಫ್ಟ್ ಲಾಕ್ ಆಗಿ ಬಾಲಕನ ಕುತ್ತಿಗೆಗೆ ಹಗ್ಗ ಸಿಕ್ಕಿ ಹಾಕಿಕೊಂಡು ಬಾಲಕ ಓದ್ದಾಡಿದ್ದಾನೆ. ಇದನ್ನು ಗಮನಿಸಿ, ತಕ್ಷಣ ಜೊತೆಗಿದ್ದ ಬಾಲಕಿ ಧೈರ್ಯದಿಂದ ಕುತ್ತಿಗೆಯಿಂದ ಹಗ್ಗ ಬಿಡಿಸಿ ಬಾಲಕನ ರಕ್ಷಣೆ ಮಾಡಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಮಕ್ಕಳ ವಿಡಿಯೋ ಸಕ್ಕತ್ ವೈರಲ್ ಆಗಿದ್ದು, ಮಕ್ಕಳ ಮೇಲೆ ಪೋಷಕರು ಬಹಳ ಜಾಗೃತೆಯಿಂದ ಇರಬೇಕೆನ್ನುವ ಸಂದೇಶ ಸಾರಿದೆ.
Last Updated : Aug 23, 2019, 2:57 PM IST