ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಧಗಧಗನೆ ಹೊತ್ತಿ ಉರಿದ ಕಾಂಪ್ಲೆಕ್ಸ್ - ಹುಬ್ಬಳ್ಳಿ ಗೋಕುಲ್ ರಸ್ತೆ ಅಗ್ನಿ ಅವಘಡ
🎬 Watch Now: Feature Video
ಹುಬ್ಬಳ್ಳಿ: ನಗರದ ಗೋಕುಲ್ ರಸ್ತೆಯ ಅಕ್ಷಯ ಪಾರ್ಕ್ನಲ್ಲಿರುವ ಛಬ್ಬಿ ಅಕ್ಷಯ ಕಾರ್ನರ್ ಬಿಲ್ಡಿಂಗ್ ಬೆಳ್ಳಂಬೆಳಗ್ಗೆ ಹೊತ್ತಿ ಉರಿದಿದೆ. ಕಾಂಪ್ಲೆಕ್ಸ್ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿದೆ. ಇದು ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ ಹಾಗೂ ಸುರೇಶ್ ಶೇಜವಾಡಕರ್ ಮಾಲೀಕತ್ವದಲ್ಲಿರುವ ಕಾಂಪ್ಲೆಕ್ಸ್ ಎಂದು ಹೇಳಲಾಗುತ್ತಿದೆ. ಬಿಲ್ಡಿಂಗ್ ಸುತ್ತಲೂ ಆವರಿಸಿದ ಅಪಾರ ಪ್ರಮಾಣದ ಬೆಂಕಿಯಿಂದ ಮೊಬೈಲ್ ಶೋ ರೂಂ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು ಎರಡು ಗಂಟೆಯಿಂದ ಕಾಂಪ್ಲೆಕ್ಸ್ ಬೆಂಕಿಯಲ್ಲಿ ಉರಿಯುತ್ತಿದ್ದು, ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ. ಈ ಸಂಬಂಧ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.