ಶತಮಾನದ ಹೊಸ್ತಿಲಲ್ಲಿ ಸಾಮಾನ್ಯ ಬಜೆಟ್​ ಜತೆ ರೈಲ್ವೆ ವಿಲೀನ... ಇದಕ್ಕೆ ಕಾರಣ ಯಾರು? - 2020 ಕೇಂದ್ರ ಬಜೆಟ್

🎬 Watch Now: Feature Video

thumbnail

By

Published : Jan 27, 2020, 8:22 PM IST

1853ರಲ್ಲಿ ಮುಂಬೈಯಿಂದ ಪ್ರಥಮ ಬಾರಿಗೆ ಅಡಿಯಿಟ್ಟ ರೈಲು 400 ಪ್ರಯಾಣಿಕರನ್ನು ಹೊತ್ತು ದಟ್ಟ ಹೊಗೆ ಉಗುಳುತ್ತ 33 ಕಿಲೋಮೀಟರ್​ ದೂರದ ಥಾಣೆಯನ್ನು ತಲುಪಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಅಂದು ಮಂದಗತಿಯಲ್ಲಿ ಸಾಗಿದ್ದ ಇದೇ ಭಾರತೀಯ ರೈಲು 2019ರ ವೇಳೆಗೆ 180 ಸ್ಪೀಡ್​ ವೇಗದ ವಂದೇ ಭಾರತ್​ ಎಕ್ಸ್​​ಪ್ರೆಸ್ ಅನ್ನು ದೇಶಕ್ಕೆ ಪರಿಚಯಿಸಿತ್ತು. ಈ 168 ವರ್ಷಗಳಲ್ಲಿ ಭಾರತೀಯ ರೈಲು ಸಾಗಿ ಬಂದ ಹಾದಿಯು ಗ್ರಾಮೀಣ ಹಾಗೂ ನಗರ ಭಾರತೀಯರ ಅವಿಭಾಜ್ಯ ಅಂಗವಾಗಿದೆ. ರೈಲ್ವೆಯ ಕೊನೆಯ ಬಜೆಟ್​ ಅನ್ನು  ಅಂದಿನ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರು 2016ರ ಫೆಬ್ರವರಿ 25ರಂದು ಮಂಡಿಸಿದ್ದರು. 2017ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರು ಸಾಮಾನ್ಯ ಬಜೆಟ್​ನೊಂದಿಗೆ ರೈಲ್ವೆಯ ಅನುದಾನವನ್ನು ಮಂಡಿಸಿದ್ದರು. ಇನ್ನು ಇದೇ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಮ್ಮ ಚೊಚ್ಚಲ ಪೂರ್ಣಪ್ರಮಾಣದ ಬಜೆಟ್​ನಲ್ಲಿ ರೈಲ್ವೆಗೆ ಏನು ಅನುದಾನ ನೀಡಲಿದ್ದಾರೆ ಎಂಬುದನ್ನು ಎದುರು ನೋಡಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.