ಮುಂಬೈನಲ್ಲಿ ಚಾಲಕ ರಹಿತ ಮೆಟ್ರೋ ರೈಲಿಗೆ ಸಿಎಂ ಉದ್ಧವ್ ಠಾಕ್ರೆ ಚಾಲನೆ.. - first driverless metro in Mumbai
🎬 Watch Now: Feature Video

ಮುಂಬೈ-ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನಲ್ಲಿ ಮೊದಲ ಚಾಲಕ ರಹಿತ ಮೆಟ್ರೋ ರೈಲ್‌ನ ಉದ್ಘಾಟಿಸಿದರು. ಚಾರ್ಕೋಪ್ ಕಾರ್‌ಶೆಡ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ವೇಳೆ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹಾಗೂ ರಾಜ್ಯದ ಇತರ ಸಚಿವರು ಉಪಸ್ಥಿತರಿದ್ದರು. ಈ ಮೆಟ್ರೋದ ಟ್ರಯಲ್ ರನ್‌ನ ಫೆಬ್ರವರಿಯಲ್ಲಿ ನಡೆಯಲಿದೆ. ಮೆಟ್ರೋ 2ಎ ಮತ್ತು ಮೆಟ್ರೋ 7 ಮಾರ್ಗಗಳಲ್ಲಿ ಚಲಿಸುತ್ತದೆ. ಮುಂದಿನ ಮೇ ತಿಂಗಳಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಬೆಂಗಳೂರು ಮೂಲದ ಬಿಇಎಂಎಲ್ ಮೆಟ್ರೋ ಕೋಚ್ ಈ ರೈಲುಗಳನ್ನು ನಿರ್ಮಿಸಿದ್ದು, ಇನ್ನೂ 84 ಮೆಟ್ರೋಗಳನ್ನು ನಿರ್ಮಿಸಲಿದೆ.