ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಕಿಗಾಹುತಿಯಾದ ಕಾರು... ಚಾಲಕ ಪಾರು! - Latest Accident In Shiradi
🎬 Watch Now: Feature Video

ಶಿರಾಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಡೇಲು ಎಂಬಲ್ಲಿ ಮಾರುತಿ 800 ಕಾರೊಂದು ಆಕಸ್ಮಿಕವಾಗಿ ಬೆಂಕಿಗೆ ತಗುಲಿ ದಿಢೀರ್ ಆಗಿ ಹೊತ್ತಿ ಉರಿದಿದೆ. ಕಡಬ ತಾಲೂಕು ರಾಮಕುಂಜ ನಿವಾಸಿ ಪ್ರವೀಣ್ ಡಿಸೋಜ್ ಬೆಂಗಳೂರಿನಿಂದ ರಾಮಕುಂಜದ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಾಹನದಲ್ಲಿ ಏಕಾಏಕಿ ಹೊಗೆ ಆವರಿಸಿರುವುದನ್ನು ಗಮನಿಸಿದ ಪ್ರವೀಣ್ ಕಾರಿನಿಂದ ಹೊರಗಡೆ ಇಳಿದಿದ್ದಾರೆ. ಇದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣವಾಗಿ ನಾಶವಾಗಿದೆ. ನೆಲ್ಯಾಡಿ ಹೊರಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.