10 ವರ್ಷದಿಂದ ಈ ಗ್ರಾಮದಲ್ಲಿ ಮದುವೆಗಳೇ ನಡೆದಿಲ್ಲ: ಕಂಕಣ ಭಾಗ್ಯವಿಲ್ಲದೆ ಯುವಕರ ವಿರಹವೇದನೆ - gadagoli village
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12613544-thumbnail-3x2-nin.jpg)
ಈ ಊರಿನ ಯುವಕರು ನೋಡೋಕೇನೋ ಚೆನ್ನಾಗೆ ಇದ್ದಾರೆ. ಬೇಕಾದಷ್ಟು ಜಮೀನು, ನೌಕರಿ ಎಲ್ಲವೂ ಇದೆ. ಆದರೆ ಇವ್ರಿಗೆ ಕಂಕಣ ಭಾಗ್ಯವೇ ಕೂಡಿ ಬರ್ತಿಲ್ಲ. ಕಿಟಕಿ ಬಾಗಿಲುಗಳಿಲ್ಲದ ಬಿದ್ದು ಹೋಗಿರೋ ಮನೆಗಳು, ತಗಡಿನ ಶೆಡ್ಗಳಲ್ಲಿ ಬದುಕು ದೂಡ್ತಿರೋ ಈ ಜನರಿಗೆ ಯಾರ್ ತಾನೇ ಹೆಣ್ಣು ಕೊಡ್ತಾರೆ ಹೇಳಿ.. ಹೌದು, ಈ ಊರಿನ ಯುವಕರು 40 ದಾಟಿದ್ರೂ ಮದುವೆ ಆಗದೇ ಇರೋಕೆ ಕಾರಣ ಸೂರಿನ ಸಮಸ್ಯೆ. ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಮದುವೆಗಳೇ ನಡೆದಿಲ್ಲವಂತೆ.