ಸಿಆರ್ಡಿಎ ಕಾಯ್ದೆ ರದ್ಧತಿ ವಿರುದ್ಧ ಪ್ರತಿಭಟನೆ: ನ್ಯಾಯಕ್ಕಾಗಿ ಹೈಕೋರ್ಟ್ ಮುಂದೆ ಆರತಿ ಎತ್ತಿದ ಮಹಿಳೆಯರು - Farmers protest in Andhra Pradesh
🎬 Watch Now: Feature Video
ಅಮರಾವತಿ (ಆಂಧ್ರ ಪ್ರದೇಶ) : ಅಧಿಕಾರ ವಿಕೇಂದ್ರೀಕರಣ ಮತ್ತು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್ಡಿಎ) ವನ್ನು ರದ್ದುಪಡಿಸುವ ಮಸೂದೆ ವಿರುದ್ಧ ಅಮರಾವತಿಯ ರಾಯಪುಡಿ ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಅಲ್ಲದೆ, ಮಹಿಳೆಯರು ಹೈಕೋರ್ಟ್ ಮುಂದೆ ಆರತಿ ಎತ್ತಿ ನ್ಯಾಯ ನೀಡುವಂತೆ ನ್ಯಾಯಾಧೀಶರನ್ನು ಕೋರಿದರು. ರಾಜ್ಯಪಾಲರು ನೀಡಿರುವ ಗೆಜೆಟ್ಅನ್ನು ತಡೆ ಹಿಡಿಯಬೇಕೆಂದು ರೈತರು ಮತ್ತು ಜೆಎಸಿ ಸಂಘಟನೆಯ ಕಾರ್ಯಕರ್ತರು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.