thumbnail

By

Published : Nov 21, 2019, 12:08 PM IST

ETV Bharat / Videos

ಫೇಸ್​ಬುಕ್​ ಲೈವ್​ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ: ವಿಡಿಯೋ ವೈರಲ್​!

ಕರೂರ್​(ತಮಿಳುನಾಡು): ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಯುವಕನೋರ್ವ ಜ್ಯೂಸ್​ನಲ್ಲಿ ಕ್ರಿಮಿನಾಶಕ ಬೆರೆಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಜಿಲ್ಲೆಯ ಸನರ್​ಪಟ್ಟಿಯಲ್ಲಿ ನಡೆದಿದೆ. 22 ವರ್ಷದ ಸದಾನಂದಮ್​ ಆತ್ಮಹತ್ಯೆಗೆ ಯತ್ನಿಸಿ ಸದ್ಯ ಸ್ನೇಹಿತರ ರಕ್ಷಣೆಯಿಂದ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಶಾಲೆ ಬಿಟ್ಟು ಪೈಂಟಿಂಗ್​ ಕೆಲಸ ಮಾಡುತ್ತಿದ್ದ. ಅಲ್ಲದೆ ಮರಳು ಮಾರಾಟದಲ್ಲಿ ತೊಡಗಿದ್ದ. ಹೀಗಾಗಿ ಈತನನ್ನು ಬಸುಮತಿಪಾಲಯಂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಇದರಿಂದ ನೊಂದ ಯುವಕ ಫೇಸ್​ಬುಕ್​ ಲೈವ್​ ಮಾಡಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಈ ಬಗ್ಗೆ ಬಸುಮತಿಪಾಲಯಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.