ಕಿವಿಯಲ್ಲಿ ಹೆಡ್​ಫೋನ್​: ರೈಲ್ವೆ ಹಳಿ ದಾಟುತ್ತಿದ್ದಾಗ ಮಹಿಳೆ ಮೇಲೆ ಹರಿದ ರೈಲು! ವಿಡಿಯೋ - ಮಹಿಳೆ ಮೇಲೆ ಹರಿದ ರೈಲು

🎬 Watch Now: Feature Video

thumbnail

By

Published : Jan 16, 2021, 9:44 PM IST

ಹೋಶಂಗಾಬಾದ್​(ಮಧ್ಯಪ್ರದೇಶ): ಕಿವಿಯಲ್ಲಿ ಹೆಡ್​ಪೋನ್​ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ ಆರೋಗ್ಯ ಕಾರ್ಯಕರ್ತೆ ಮೇಲೆ ರೈಲ್ವೆ ಹರಿದು ಸಾವನ್ನಪ್ಪಿದ್ದು, ಮಧ್ಯಪ್ರದೇಶದ ಹೋಶಂಗಾಬಾದ್​ನ ಡಬಲ್​ ಗೇಟ್​ ಬಳಿ ಈ ಘಟನೆ ನಡೆದಿದೆ. ಕಿವಿಯಲ್ಲಿ ಹೆಡ್​ಫೋನ್​ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ಸೂಪರ್​ ಫಾಸ್ಟ್​ ರೈಲು ಬಂದಿದ್ದು ಆಕೆಗೆ ಗೊತ್ತಾಗಿಲ್ಲ. ಸಡನ್​ ಆಗಿ ಅದನ್ನು ನೋಡಿ ಗಾಬರಿಯಲ್ಲಿ ರೈಲ್ವೆ ಹಳಿ ದಾಟಲು ಮುಂದಾಗಿದ್ದಾಳೆ. ಈ ವೇಳೆ ಆಕೆಯ ಮೇಲೆ ಹರಿದು ಹೋಗಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದ ಮಹಿಳೆ ಸಂಜೆ ವೇಳೆ ಹಳಿ ದಾಟಿ ಮನೆಗೆ ಹೋಗ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.