21 ಮೇಕೆಗಳನ್ನು ಕದ್ದು ಕಾರಿನಲ್ಲಿ ಕೊಂಡೊಯ್ದ ಕಳ್ಳರು: ವಿಡಿಯೋ - ಆಡುಗಳ ಕಳ್ಳತನ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11082834-thumbnail-3x2-nashik.jpg)
ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಳ್ಳರು ಮಾಂಸ ವ್ಯಾಪಾರಿಗಳ ಬಳಿಯಿದ್ದ 21 ಮೇಕೆಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಾರ್ಚ್ 18 ರ ರಾತ್ರಿ ಈ ಘಟನೆ ನಡೆದಿದೆ. ಮಾಂಸದ ಅಂಗಡಿಯ ಮುಂದೆ ಕಾರ್ನಲ್ಲಿ ಬಂದ ಕಳ್ಳರು, ಕಾರಿನಲ್ಲಿ ಆಡುಗಳನ್ನು ತುಂಬಿಸಿಕೊಂಡು ತೆರಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಂಸ ವ್ಯಾಪಾರಿಯ ಸುಮಾರು 2 ಲಕ್ಷ ರೂ. ಮೌಲ್ಯದ ಆಡುಗಳನ್ನು ಕದ್ದೊಯ್ಯಲಾಗಿದೆ ಎಂದು ಅಂದಾಜಿಸಲಾಗಿದೆ.
Last Updated : Mar 20, 2021, 12:06 PM IST