ಮಾಸ್ಕ್ ಹಾಕಿಲ್ಲವೆಂದು ಮಗಳಿಗೆ ಚಿಕಿತ್ಸೆ ನೀಡದ ವೈದ್ಯರು: ಖಾಕಿಯಿಂದ ಅಮಾನವೀಯ ರೀತಿ ಹಲ್ಲೆ! - ಜಾರ್ಖಂಡ್ನ ಗೊಡ್ಡಾ ಸುದ್ದಿ
🎬 Watch Now: Feature Video
ಗೊಡ್ಡಾ( ಜಾರ್ಖಂಡ್): ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡ ಬಂದ ವ್ಯಕ್ತಿ ಮಾಸ್ಕ್ ಹಾಕಿಲ್ಲ ಎಂದು ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಜಾರ್ಖಂಡ್ನ ಗೊಡ್ಡಾದಲ್ಲಿ ಈ ಘಟನೆ ನಡೆದಿದ್ದು, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಂತೆ ವ್ಯಕ್ತಿ ಆಸ್ಪತ್ರೆಯಿಂದ ಹೋಗಲು ಹಿಂದೇಟು ಹಾಕಿದ್ದಾನೆ. ಈ ವೇಳೆ, ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಗೆ ಆಗಮಿಸಿದ ಎಎಸ್ಐ ಪಂಕಜ್ ಕುಮಾರ್ ವ್ಯಕ್ತಿಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ತದನಂತರ ಆತನನ್ನ ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.