ರಾಷ್ಟ್ರಪತಿ, ಪ್ರಧಾನಿ ಓಡಾಟಕ್ಕೆ ಬಂತು 1,345 ಕೋಟಿ ರೂ. ವೆಚ್ಚದ ಏರ್ ಇಂಡಿಯಾ ಒನ್ ವಿಮಾನ - ಬೋಯಿಂಗ್ 777 ವಿಮಾನ ಸುದ್ದಿ
🎬 Watch Now: Feature Video
ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಅವರ ಪ್ರಯಾಣಕ್ಕಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಬೋಯಿಂಗ್ 777 ವಿಮಾನ ಅಮೆರಿಕದಿಂದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ವಿದೇಶಿ ಪ್ರವಾಸ ಹಾಗೂ ಇತರ ವಿಶೇಷ ಸಂಚಾರಕ್ಕೆ ಮಾತ್ರವೇ ಈ ವಿಮಾನಗಳನ್ನು ಬಳಸುತ್ತಾರೆ. ಸಭಾ ಕೊಠಡಿಗಳು, ಸಂವಹನಕ್ಕಾಗಿ ಆಧುನಿಕ ವ್ಯವಸ್ಥೆ, ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪ್ರತ್ಯೇಕ ಕಾರ್ಯಾಲಯ ಇರಲಿದೆ. ಅಮೆರಿಕದ ಡಲ್ಲಾಸ್ನಲ್ಲಿ 1,345 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಏರ್ ಇಂಡಿಯಾ ಒನ್ ವಿಮಾನ ಇದಾಗಿದೆ.
Last Updated : Oct 1, 2020, 6:35 PM IST