ಹೀಗೂ ಉಂಟೇ! ಒಂದೇ ಮಂಟಪದಲ್ಲಿ ವರನಿಗೆ ಕೊರಳೊಡ್ಡಿದ ಅಕ್ಕ-ತಂಗಿ! ವಿಡಿಯೋ ನೋಡಿ - ಒಂದೆ ವರನೊಂದಿಗೆ ಎರಡು ವಧುಗಳ ಮದುವೆ

🎬 Watch Now: Feature Video

thumbnail

By

Published : Dec 11, 2019, 8:26 PM IST

ಒಂದೇ ಮದುವೆ ಮಂಟಪದಲ್ಲಿ ವ್ಯಕ್ತಿಯೊಬ್ಬರನ್ನು ಅಕ್ಕ-ತಂಗಿಯರಿಬ್ಬರೂ ವರಿಸಿರುವ ಕುತೂಹಲಕಾರಿ ಘಟನೆ ಮಧ್ಯಪ್ರದೇಶ ಬಿಂದ್​ ಜಿಲ್ಲೆಯಲ್ಲಿ ನಡೆದಿದೆ. ಗುದಾವ್ಲಿ ಗ್ರಾಮದ ನಿವಾಸಿ ದೀಪಕ್​ ಪರಿಹಾರ್​ ಮತ್ತು ಸಾಕ್ಷತಾ ದೇವಿಗೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು, ಒಂದು ಗಂಡು ಮಗುವಿದೆ. ಸಾಕ್ಷತಾ ದೇವಿ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದು, ಮಕ್ಕಳ ಆರೈಕೆಗಾಗಿ ಸಂಕಷ್ಟ ಅನುಭವಿಸುತ್ತಿದ್ದಳು. ಹೀಗಾಗಿ ಆಕೆ ತಮ್ಮ ಒಡಹುಟ್ಟಿದ ತಂಗಿಯನ್ನೇ ತನ್ನ ಗಂಡನೊಂದಿಗೆ ಮದುವೆ ಮಾಡಲು ತೀರ್ಮಾನಿಸಿದ್ದಳು. ಈ ಬಗ್ಗೆ ತಮ್ಮ ಕುಟುಂಬದವರು ಮತ್ತು ಗ್ರಾಮದ ಪಂಚಾಯ್ತಿ ಸದಸ್ಯರನ್ನೂ ಒಪ್ಪಿಸಿದ್ದಾರೆ. ಪಂಚಾಯ್ತಿ ಸದಸ್ಯರ ಒಪ್ಪಿಗೆ ಮೇರೆಗೆ ದೀಪಕ್​ ಪರಿಹಾರ್​ ತಮ್ಮ ಪತ್ನಿಯನ್ನು ಮತ್ತೊಮ್ಮೆ ಮದುವೆಯಾಗಿ, ಬಳಿಕ ಅದೇ ವೇದಿಕೆಯಲ್ಲಿ ನಾದನಿಯನ್ನು ವರಿಸಿದ್ರು. ಇನ್ನು ಈ ಮದುವೆ ಕಾನೂನು ವಿರುದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ಒಂದೇ ವೇದಿಕೆಯಲ್ಲಿ ಸಹೋದರಿಯರಿಬ್ಬರನ್ನೂ ಮದುವೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.