ಗುಜರಾತ್‌ನ ಸಂಪ್ರದಾಯಿಕ ನೃತ್ಯ ರಾಸ್ ಮೂಲಕ ಟ್ರಂಪ್ಗೆ ಸ್ವಾಗತ! - ಅಹಮದಾಬಾದ್ನ ಮೊಟೆರಾ
🎬 Watch Now: Feature Video
ಅಹಮದಾಬಾದ್: ಸಾಂಪ್ರದಾಯಿಕ ಜಾನಪದ ನೃತ್ಯ ತಂಡ ಮಹೇರ್ ಮಣಿಯಾರಾ, ಫೆ. 24ರಂದು ಭಾರತಕ್ಕೆ ಬರಲಿರುವ ಡೊನಾಲ್ಡ್ ಟ್ರಂಪ್ ಅವರನ್ನು ರಾಸ್ ನೃತ್ಯದ ಮೂಲಕ ಸ್ವಾಗತಿಸಲಿದ್ದಾರೆ. ಅಹಮದಾಬಾದ್ನ ಮೊಟೆರಾದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ, ವಿಶ್ವ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆಗೆ ಟ್ರಂಪ್ ಬರಲಿದ್ದಾರೆ. ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಪ್ರದರ್ಶಿಸುವಲ್ಲಿ ಹೆಸರು ವಾಸಿಯಾದ ಮಹೇರ್ ಮನಿಯಾರಾ ಮತ್ತು ಲೀರ್‌ಬಾಯಿ ರಾಸ್ ಮಂಡಲ್ ತಂಡಗಳು ಈ ಪ್ರದರ್ಶನ ನೀಡಲಿವೆ. ಫೆಬ್ರವರಿ 23 ರಂದು ಪ್ರಧಾನಿ ಮೋದಿ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೂಡ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಎರಡು ತಂಡಗಳ, ಪುರುಷ ಮತ್ತು ಮಹಿಳಾ ನರ್ತಕಿಯರು, ಕಳೆದ ಎರಡು ದಿನಗಳಿಂದ ಪ್ರದರ್ಶನಕ್ಕಾಗಿ ಪೋರ್ಬಂದರ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.