ಖುದ್ದು ರಸ್ತೆಗಳಿದು ನೈಟ್ ಕರ್ಫ್ಯೂ ಪರಿಶೀಲಿಸಿದ ತ್ರಿಪುರ ಸಿಎಂ - tripura cm Biplab Kumar Deb
🎬 Watch Now: Feature Video

ಅಗರ್ತಲ (ತ್ರಿಪುರ): ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರು ನಿನ್ನೆ ರಾತ್ರಿ ಖುದ್ದು ರಸ್ತೆಗಿಳಿದು ಕರ್ಫ್ಯೂ ನಿಯಮ ಪಾಲನೆಯಾಗುತ್ತಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ. ಆರೋಗ್ಯಾಧಿಕಾರಿಗಳ ಜೊತೆ ಸೇರಿ ಅಗರ್ತಲ ನಗರದಲ್ಲಿ ರೌಂಡ್ ಹಾಕಿದ ಅವರು, ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿ, ಆಸ್ಪತ್ರೆಗಳು, ಕೋವಿಡ್ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಸೂಚಿಸಿದರು. ತ್ರಿಪುರದಲ್ಲಿ ಏಪ್ರಿಲ್ 22ರಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ.