ಜಮ್ಮುಕಾಶ್ಮೀರ ಹಿಮಪಾತ: ಪ್ರವಾಸಿಗರ ಮನಕ್ಕೆ ಮುದ ನೀಡುತ್ತಿದೆ 'ಗುಲ್ಮಾರ್ಗ್'
🎬 Watch Now: Feature Video
ಜಮ್ಮು ಮತ್ತು ಕಾಶ್ಮೀರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಳೆದ ನಾಲ್ಕು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಹಿಮಪಾತವಾಗುತ್ತಿದೆ. ಬಯಲು ಪ್ರದೇಶಗಳಲ್ಲಿ ಮಳೆ ಮತ್ತು ಎತ್ತರ ಪ್ರದೇಶಗಳಲ್ಲಿ ಲಘು ಹಿಮಪಾತವು ಮಧ್ಯಂತರವಾಗಿ ಮುಂದುವರೆದಿದೆ. ಉತ್ತರ ಕಾಶ್ಮೀರದ ಸುಂದರ ಪ್ರವಾಸಿ ತಾಣವಾದ ಗುಲ್ಮಾರ್ಗ್ನಲ್ಲಿ ಹಿಮಪಾತವಾಗುತ್ತಿದ್ದು,ಪ್ರವಾಸಿಗರು ಆನಂದಿಸುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 23 ರವರೆಗೆ ಕಾಶ್ಮೀರ ಕಣಿವೆಯ ಹವಾಮಾನವು ಹೆಚ್ಚು - ಕಡಿಮೆ ಕೆಟ್ಟದಾಗಿರುವ ಸಾಧ್ಯತೆಯಿದೆ.