ಸ್ವತಃ ಹಾಡು ರಚಿಸಿ, ಹೇಳಿ ಜಾಗೃತಿ ಮೂಡಿಸಿದ ಪೊಲೀಸಪ್ಪ - ಕೊರೊನಾ ಹಾಡು
🎬 Watch Now: Feature Video
ರಾಜಸ್ಥಾನ ಉದಯಪುರ ಜಿಲ್ಲೆಯ ಜಾಡೋಲ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಕೊರೊನಾ ಕುರಿತಾಗಿ ಹಾಡೊಂದನ್ನು ರಚಿಸಿ, ಹಾಡುವ ಮೂಲಕ ಗ್ರಾಮಸ್ಥರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಿದ್ದಾರೆ. ಪೊಲೀಸ್ ಅಧಿಕಾರಿ ಸುರೇಂದ್ರ ಸಿಂಗ್ ರಾವ್ ಸ್ವತಃ ತಾವೇ ಈ ಹಾಡು ರಚಿಸಿದ್ದು, ಈ ಹಾಡಿನ ಮೂಲಕ ಜನರಿಗೆ ಕೊರೊನಾ ಹರಡದಂತೆ ಜಾಗೃತಿ ವಹಿಸಿ ಹಾಗೂ ಕೊರೊನಾ ನಿಯಂತ್ರಿಸಲು ಎಲ್ಲರೂ ಮನೆಯಲ್ಲಿಯೇ ಇರಬೇಕೆಂದು ಹಾಡಿನ ಮೂಲಕವೇ ಮನವಿ ಮಾಡಿ ಗಮನ ಸೆಳೆದಿದ್ದಾರೆ.