ETV Bharat / state

ಧಾರವಾಡ ಕವಿವಿ ಪಠ್ಯ ವಿವಾದ; ತಜ್ಞರ ಸಮಿತಿ ರಚನೆ - KUD SYLLABUS ISSUE

ಧಾರವಾಡದ ಕರ್ನಾಟಕ ವಿವಿಯ ಪಠ್ಯ ವಿವಾದಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ ವಿವಿ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದೆ.

ಧಾರವಾಡ ಕವಿವಿ
ಧಾರವಾಡ ಕವಿವಿ (ETV Bharat)
author img

By ETV Bharat Karnataka Team

Published : Jan 23, 2025, 1:42 PM IST

Updated : Jan 23, 2025, 2:25 PM IST

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಷಯದ ಪಠ್ಯ ವಿವಾದಕ್ಕೆ ಗುರಿಯಾಗಿದೆ. ವಿವಿಯ ಪ್ರಸಾರಂಗದಿಂದ ಮುದಿತ್ರವಾಗಿರುವ ಕನ್ನಡ ವಿಷಯದ ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ವಿಷಯಗಳಿವೆ ಎಂಬ ಆರೋಪ ಕೇಳಿಬಂದಿದೆ.

ಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್​​ಡಬ್ಲ್ಯು, ಬಿವಿಎ, ಬಿಎಸ್​ಸಿ ಸೇರಿದಂತೆ ಕೆಲ ಪದವಿಗಳ ಪ್ರಥಮ ಸೆಮಿಸ್ಟರ್​​ನ 'ಬೆಳಗು 1' ಕನ್ನಡ ಪಠ್ಯ ಪುಸ್ತಕದಲ್ಲಿನ ರಾಷ್ಟ್ರೀಯ ಆಚರಣೆಯ ಸುತ್ತ ಎಂಬ ಅಧ್ಯಾಯದಲ್ಲಿನ ಕೆಲ ವಿಷಯಗಳು ಆಕ್ಷೇಪಾರ್ಹವಾಗಿವೆ. ಈ ಪಠ್ಯ ಪುಸ್ತಕ ವಾಪಸ್ ಪಡೆದು, ಇದಕ್ಕೆ ಕಾರಣರಾದವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಹಿರಿಯ ನ್ಯಾಯವಾದಿ ಅರುಣ ಜೋಶಿ ಆಗ್ರಹಿಸಿದ್ದಾರೆ.

ಧಾರವಾಡ ಕವಿವಿ ಪಠ್ಯ ವಿವಾದ; ತಜ್ಞರ ಸಮಿತಿ ರಚನೆ (ETV Bharat)

ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಅದರಲ್ಲೂ ವಿಶ್ವವಿದ್ಯಾಲಯದಂತಹ ಸಂಸ್ಥೆಯಲ್ಲಿ ಈ ರೀತಿಯ ಪಾಠ ಸೇರಿಸಿರುವುದು ಸಂವಿಧಾನ ವಿರೋಧಿ, ದೇಶ ವಿರೋಧಿ ಮತ್ತು ಭಾರತದ ಏಕತೆಯ ವಿರೋಧಿಯಾಗಿದೆ. ಈ ಕುರಿತು ಶಿಸ್ತು ಕ್ರಮ ಆಗದಿದ್ದರೆ, ಕೋರ್ಟ್​ನಲ್ಲಿ ಪ್ರಕರಣ ದಾಖಲಿಸುತ್ತೇವೆ. ಜೊತೆಗೆ ರಾಜ್ಯಪಾಲರು ಮತ್ತು ಯುಜಿಸಿಗೂ ದೂರು ನೀಡುತ್ತೇವೆ ಎಂದು ಅರುಣ್ ಜೋಶಿ ತಿಳಿಸಿದ್ದಾರೆ.

ತಜ್ಞರ ಸಮಿತಿ ರಚನೆ : ವಿವಿ ನಿಯಮಾನುಸಾರ ವಿಶೇಷ ಬಿಒಎಸ್ ಸಭೆ ನಡೆಸಿ, ಅವರು ನೀಡಿರುವ ನಿರ್ಣಯದ ಪ್ರಕಾರ ಡೀನ್ ಕಮಿಟಿಯಲ್ಲಿ ಚರ್ಚಿಸಿ, ಬೆಳಗು 1 ಪಠ್ಯ ಪುಸ್ತಕದ ಪರಿಷ್ಕರಣೆ ಕುರಿತು ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಂವಿಧಾನದ ತಜ್ಞರು, ಕನ್ನಡ ಭಾಷಾ ತಜ್ಞರು ಸೇರಿದಂತೆ ನಾಲ್ವರು ವಿಷಯ ತಜ್ಞರಿದ್ದಾರೆ. ಈ ಸಮಿತಿ ಕೊಡುವ ವರದಿ ಮತ್ತು ಸಲಹೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಧಾರವಾಡದ ಕವಿವಿ ಕುಲಪತಿ ಡಾ. ಎಸ್. ಜಯಶ್ರೀ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ 2 ಗೌರವ ಡಾಕ್ಟರೇಟ್ ಪ್ರದಾನ

ಇದನ್ನೂ ಓದಿ: ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಗೆ ಅನುಮೋದನೆ; ಸಿಎಂ, ಡಿಸಿಎಂಗೆ ಅಭಿನಂದನೆ

Last Updated : Jan 23, 2025, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.