Watch: ತಮಿಳುನಾಡಿನಲ್ಲಿ ಭಾರಿ ಮಳೆ, ಚೆನ್ನೈ ಸೇರಿ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ - ಚೆನ್ನೈನಲ್ಲಿ ಭಾರೀ ಮಳೆ
🎬 Watch Now: Feature Video
ಚೆನ್ನೈ: ತಮಿಳುನಾಡಿನ ಹಲವೆಡೆ ನಿನ್ನೆಯಿಂದ ಭಾರಿ ಮಳೆಯಾಗುತ್ತಿದೆ. ಇಂದು ಕೂಡಾ ಜೋರು ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ರಾಜಧಾನಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚಿಂಗ್ಲೆಪೇಟ್ ಸೇರಿದಂತೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಡಿ ಮಳೆಗೆ ರಾಜಧಾನಿ ಮತ್ತು ಉಪನಗರಗಳಲ್ಲಿನ ರಸ್ತೆಗಳು ಹಾಗೂ ಸುರಂಗಮಾರ್ಗಗಳು ಜಲಾವೃತವಾಗಿವೆ. ರಸ್ತೆಗಳನ್ನು ಕಿಲೋ ಮೀಟರುಗಟ್ಟನೆ ಸಂಚಾರ ದಟ್ಟನೆ ಕಂಡುಬಂತು. ಸಿಎಂ ಎಂ.ಕೆ.ಸ್ಟಾಲಿನ್ ಕಳೆದ ರಾತ್ರಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಪ್ರವಾಹ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಮಳೆ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದರು. ಮಳೆ ಪರಿಣಾಮ ವಿದ್ಯುತ್ ಸ್ಪರ್ಶದಿಂದಾಗಿ ಬಾಲಕ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಬಂದ್ ಮಾಡಲಾಗಿದೆ.
Last Updated : Dec 31, 2021, 4:34 PM IST