ನಾಲ್ಕೈದು ವರ್ಷಗಳಿಂದ ಮಾಂಸಾಹಾರ ತ್ಯಜಿಸಿದ್ದಾರಂತೆ ಸನ್ನಿ ಲಿಯೋನ್! - ಸನ್ನಿಲಿಯೋನ್
🎬 Watch Now: Feature Video

ಮುಂಬೈ: ಬಾಲಿವುಡ್ನ ಮಾದಕ ನಟಿ ಸನ್ನಿಲಿಯೋನ್ ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ನಡೆಯುತ್ತಿರುವ "ವೆಗಾನ್ ಫ್ಯಾಶನ್ ಶೋ"ಗೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಜೊತೆ ಕೈಜೋಡಿಸಿ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಇದೇ ವೇಳೆ ಮಾತನಾಡಿರುವ ಸನ್ನಿ ಲಿಯೋನ್ ನಾನು 4-5 ವರ್ಷಗಳ ಹಿಂದೆಯೇ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದೇನೆ. ಪ್ರಾಣಿಗಳ ಸಂಕಟವು ಸಹಿಸಲಾಗದ ಸಂಗತಿಯಾಗಿದೆ. ಪ್ರಾಣಿಗಳು ನಿರಪರಾಧಿಗಳು ಎಂದು ಹೇಳಿದರು.