ಕೇದಾರನಾಥದಲ್ಲಿ ಭಾರೀ ಹಿಮಪಾತ.. ಸುತ್ತಲಿರುವ ಬೆಟ್ಟಗಳು ಹಿಮದಿಂದ ಆವೃತ
🎬 Watch Now: Feature Video
ರುದ್ರಪ್ರಯಾಗ್ (ಉತ್ತರಾಖಂಡ): ರಾಜ್ಯದಲ್ಲಿ ಮಳೆ ಮತ್ತು ಹಿಮಪಾತದಿಂದಾಗಿ ಹವಾಮಾನವು ಆಹ್ಲಾದಕರವಾಗಿದ್ದು, ವಿಶ್ವಪ್ರಸಿದ್ಧ ಕೇದಾರನಾಥದಲ್ಲಿ ಹಿಮಪಾತ ಮುಂದುವರೆದಿದೆ. ದೇವಾಲಯದ ಸುತ್ತಲಿರುವ ಎಲ್ಲ ಬೆಟ್ಟಗಳು ಹಿಮದಿಂದ ಆವೃತವಾಗಿದ್ದು, ಸುಮಾರು ಎರಡು ಅಡಿಗಳಷ್ಟು ಹಿಮ ಬಿದ್ದಿದೆ. ದೇವಾಲಯದಲ್ಲಿ ಕೆಲ ಋಷಿಮುನಿಗಳು ಹೊರತುಪಡಿಸಿ ಬೇರೆ ಯಾರೂ ಇಲ್ಲ. ಕೇದಾರನಾಥದಿಂದ ಎರಡು ಕಿ.ಮೀ ದೂರದಲ್ಲಿರುವ ಗರುಡ್ಚಟ್ಟಿಯಲ್ಲಿ ಭಾರೀ ಹಿಮಪಾತವಾಗಿದ್ದು, ಮನೆಗಳ ಛಾವಣಿಗಳು ಮತ್ತು ಮಾರ್ಗಗಳು ಕೂಡಾ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿವೆ.