ರಾಷ್ಟ್ರ ರಾಜಧಾನಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ: ಪೊಲೀಸರಿಂದ ಬಿಗಿ ಭದ್ರತೆ - ನವದೆಹಲಿ ಸುದ್ದಿ
🎬 Watch Now: Feature Video

ನವದೆಹಲಿ: ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಜಾರಿಗೆ ಬಂದ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಗಣರಾಜ್ಯೋತ್ಸವದಂದು ರೈತ ಸಂಘಟನೆಗಳು ಕರೆದ ಟ್ರ್ಯಾಕ್ಟರ್ ರ‍್ಯಾಲಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ಮಾಡಲಾಗಿದೆ. ದೆಹಲಿಯ ಮೂರು ಗಡಿ ಬಿಂದುಗಳಿಂದ ರೈತ ನಾಯಕರ ಟ್ರ್ಯಾಕ್ಟರ್ ರ‍್ಯಾಲಿಗೆ ಮೂರು ಮಾರ್ಗಗಳನ್ನು ನಿರ್ಧರಿಸಲಾಗಿದೆ ಎಂದು ದೆಹಲಿ ಪೊಲೀಸರ ಗುಪ್ತಚರ ವಿಶೇಷ ಪೊಲೀಸ್ ಆಯುಕ್ತ (ಸಿಪಿ) ಈ ಹಿಂದೆ ಜನವರಿ 24 ರಂದು ತಿಳಿಸಿದ್ದರು. ಟ್ರ್ಯಾಕ್ಟರ್ ರ್ಯಾಲಿ ಟಿಕ್ರಿ, ಸಿಂಘು, ಮತ್ತು ಗಾಜಿಪುರ ಗಡಿಗಳಿಂದ ದೆಹಲಿಯನ್ನು ಪ್ರವೇಶಿಸಲಿದೆ.