ಚಲಿಸುತ್ತಿರುವ ರೈಲಿನಲ್ಲಿ ಶಾಲಾ ಬಾಲಕಿ ಡೇಂಜರಸ್ ಸ್ಟಂಟ್ - ವಿಡಿಯೋ ವೈರಲ್ - ರೈಲಿನಲ್ಲಿ ಶಾಲಾ ಬಾಲಕಿ ಡೇಂಜರಸ್ ಸ್ಟಂಟ್
🎬 Watch Now: Feature Video
ಕವರಾಯಿಪೇಟೆ(ತಮಿಳುನಾಡು): ಶಾಲಾ ಬಾಲಕಿಯೋರ್ವಳು ಚಲಿಸುತ್ತಿರುವ ರೈಲಿನ ಡೋರ್ ಹಿಡಿದುಕೊಂಡು ಅಪಾಯಕಾರಿ ಸ್ಟಂಟ್ ಮಾಡಿದ್ದಾಳೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಾಯಿಪೇಟೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕುಮುದಿಪೂಂಡಿಗೆ ತೆರಳುತ್ತಿದ್ದ ರೈಲಿನಲ್ಲಿ ಶಾಲಾ ಬಾಲಕಿ ಈ ರೀತಿಯಾಗಿ ನಡೆದುಕೊಂಡಿದ್ದು, ವಿಡಿಯೋದಲ್ಲಿ ಓರ್ವ ಬಾಲಕ ಸಹ ಇರುವುದು ಕಂಡು ಬಂದಿದೆ. ಇಬ್ಬರು ಸಮವಸ್ತ್ರ ಧರಿಸಿದ್ದು, ಪ್ಲಾಟ್ಫಾರ್ಮ್ನಲ್ಲಿ ಚಲಿಸುತ್ತಿದ್ದ ರೈಲು ಏರಲು ಹೋಗಿ ಈ ಅಪಾಯಕಾರಿಯಾದ ದುಸ್ಸಾಹಸ ಮಾಡಿದ್ದಾರೆ.