ದೇಹದ ನರನಾಡಿಗಳು ಕಟ್ಟಿಕೊಳ್ಳುವುದೇಕೆ?... ಇಲ್ಲಿದೆ ವಿಜ್ಞಾನಿಗಳ ಉತ್ತರ - ಪ್ಲಾಸ್ಮಾದಿಂದ ಲಿಪಿಡ್‌ಗಳು ರಕ್ತನಾಳಗಳಲ್ಲಿ ಸಂಗ್ರಹವಾದಾಗ ಹೃದಯರಕ್ತನಾಳದ ಕಾಯಿಲೆ ಉಂಟಾಗುತ್ತದೆ
🎬 Watch Now: Feature Video
ನವದೆಹಲಿ: ಮುಚ್ಚಿದ ನಾಡಿ (ಅಪಧಮನಿ)ಗಳು ಮತ್ತು ಇತರ ಆರೋಗ್ಯದ ಅಪಾಯಗಳಿಗೆ ಸಂಭಾವ್ಯ ಚಿಕಿತ್ಸಕ ಗುರಿಯನ್ನು ಸಂಶೋಧಕರ ತಂಡವು ಗುರುತಿಸಿದೆ. ರಕ್ತಪ್ರವಾಹದಲ್ಲಿ ಹೆಚ್ಚಿನ ಹಾನಿಕಾರಕ ಕೊಬ್ಬಿನಿಂದಾಗಿ ನಾಡಿಗಳು ಮುಚ್ಚುವ ಸಂದರ್ಭಗಳು ಉಂಟಾಗುತ್ತವೆ. ಹೃದಯಕ್ಕೆ ಸಂಬಂಧಿಸಿದಂತೆ ಕಾರ್ನೆಗೀಸ್‌ನ ಮೆರೆಡಿತ್ ವಿಲ್ಸನ್ ಮತ್ತು ಸ್ಟೀವ್ ಫಾರ್ಬರ್ ನೇತೃತ್ವದಲ್ಲಿ ಅಧ್ಯಯನ ನಡೆಸಿ ಫಲಿತಾಂಶಗಳನ್ನು ಕಂಡು ಹಿಡಿಯಲಾಗಿದೆ. "ರಕ್ತದ ಪ್ಲಾಸ್ಮಾದಿಂದ ಲಿಪಿಡ್‌ಗಳು ರಕ್ತನಾಳಗಳಲ್ಲಿ ಸಂಗ್ರಹವಾದಾಗ ಹೃದಯರಕ್ತನಾಳದ ಕಾಯಿಲೆ ಉಂಟಾಗುತ್ತದೆ. ಇದರಿಂದಾಗಿ ಅಂತಿಮವಾಗಿ ರಕ್ತದ ಹರಿವು ನಿಲ್ಲುತ್ತದೆ. ಇದು ಹಾರ್ಟ್ ಅಟ್ಯಾಕ್ಗೆ ಕಾರಣವಾಗುತ್ತದೆ ಎಂದು ಫಾರ್ಬರ್ ವಿವರಿಸಿದ್ದಾರೆ.