216 ಅಡಿ ಎತ್ತರದ ರಾಮಾನುಜರ ಪ್ರತಿಮೆ ಅನಾವರಣ... ಯಜ್ಞದಲ್ಲಿ ಭಾಗಿಯಾಗಿರೋದು ನನ್ನ ಪುಣ್ಯ ಎಂದ ನಮೋ
🎬 Watch Now: Feature Video
216 ಅಡಿ ಎತ್ತರದ ರಾಮಾನುಜರ ಪ್ರತಿಮೆ ದೇಶಕ್ಕೆ ಅರ್ಪಣೆಯಾಗಿದೆ. 11ನೇ ಶತಮಾನದಲ್ಲಿ ಸಮಾನತೆಯ ಪರಿಕಲ್ಪನೆ ದೇಶಕ್ಕೆ ತೋರಿಸಿದ ಭಕ್ತಿಸಂತ ಶ್ರೀ ರಾಮಾನುಜಚಾರ್ಯರ ಪ್ರತಿಮೆ ಇದಾಗಿದ್ದು, ಶ್ರೀ ರಾಮಾನುಜಂ ಅವರ 1000 ನೇ ಜನ್ಮ ವಾರ್ಷಿಕೋತ್ಸವದ ಒಂದು ಭಾಗವಾಗಿ ಸಮಾನತೆಯ ಪ್ರತಿಮೆಯ ಅನಾವರಣವಾಗಿದೆ.ಹೈದರಾಬಾದ್ನ ಸಮೀಪದಲ್ಲಿರುವ ಮುಂಚಿತ್ತಾಲ್ನಲ್ಲಿ 200 ಎಕರೆ ಪ್ರದೇಶದಲ್ಲಿ ಈ ಪ್ರತಿಮೆ ನಿರ್ಮಾಣಗೊಂಡಿದೆ. 108 ದಿವ್ಯ ದೇಶಂಗಳನ್ನು ಮರುಸ್ಥಾಪನೆ ಮಾಡಲಾಗಿದ್ದು, ಬದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತು ಇತರ ದೇವಾಲಯ ಇಲ್ಲಿ ನಿರ್ಮಾಣಗೊಂಡಿವೆ.