ರಾಜಪಥ್ನಲ್ಲಿ ಮುಗಿಲೆತ್ತಕ್ಕೇರಿದ ತ್ರಿವರ್ಣ ಧ್ವಜ: ದಿಲ್ಲಿ ಗಡಿಯಲ್ಲಿ ಅನ್ನದಾತರಿಗೆ ಲಾಠಿ ಏಟು, ಅಶ್ರುವಾಯು ಸ್ವಾಗತ!- ವಿಡಿಯೋ - ಇಂದು ರೈತರ ಪ್ರತಿಭಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10385246-thumbnail-3x2-farm.jpg)
ನವದೆಹಲಿ: ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಟ್ರ್ಯಾಕ್ಟರ್ ಪರೇಡ್ ನಡೆಸಲು ಸಾವಿರಾರು ರೈತರು ಜಮಾಯಿಸಿ ದೆಹಲಿ ಗಡಿ ಪ್ರವೇಶಿಸಲು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಕಾಲ್ನಡಿಗೆಯಲ್ಲಿ ಒಳಬಂದರು. ನಗರದ ಗಡಿಗಳ ಬಳಿ ಅವ್ಯವಸ್ಥೆ ತೆರೆದುಕೊಳ್ಳುತ್ತಿದ್ದಂತೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಮತ್ತು ಟಿಯರ್ ಗ್ಯಾಸ್ ಪ್ರಯೋಗಿಸಿದರು. ದೇಶಾದ್ಯಂತ 72ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಮಧ್ಯೆ ರೈತರು "ಕಿಸಾನ್ ಪರೇಡ್" ಹೆಸರಿನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ಅವಕಾಶ ನೀಡಲಾಯಿತು.