ಪೊಲೀಸರಿಗೆ ಶರಣಾಗುವಂತೆ ಉಗ್ರನಿಗೆ ಪೋಷಕರ ಮನವಿ - ವಿಡಿಯೋ
🎬 Watch Now: Feature Video
ಕುಲ್ಗಾಂ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ನಿನ್ನೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು. ಇವರಲ್ಲಿ ಓರ್ವ ಪಾಕಿಸ್ತಾನದ ನಿವಾಸಿಯಾಗಿದ್ದು, ಹಿಲಾಲ್ ಅಹಮದ್ ಹೆಸರಿನ ಇನ್ನೋರ್ವ ಸ್ಥಳೀಯ ನಿವಾಸಿಯಾಗಿದ್ದನು. ಎನ್ಕೌಂಟರ್ಗೂ ಮುನ್ನ ಹಿಲಾಲ್ನ ತಂದೆ-ತಾಯಿ ಮಗನ ಬಳಿ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿದ್ದರು. ಆದರೆ ಹಿಲಾಲ್, ಪೋಷಕರ ಮನವಿಯನ್ನು ತಿರಸ್ಕರಿಸಿದ್ದ ಪರಿಣಾಮ ಗುಂಡೇಟಿಗೆ ಬಲಿಯಾಗಬೇಕಾಯಿತು.