ಯೋಧರ ತ್ಯಾಗ ವ್ಯರ್ಥವಾಗಲ್ಲ, ನಕ್ಸಲರಿಗೆ ಶಸ್ತ್ರಾಸ್ತ್ರಗಳಿಂದಲೇ ಉತ್ತರ: ಅಮಿತ್ ಶಾ ಗುಡುಗು - ಬಿಜಾಪುರದಲ್ಲಿ ಅಮಿತ್ ಶಾ
🎬 Watch Now: Feature Video
ಛತ್ತೀಸ್ಗಢದಲ್ಲಿ ನಡೆದಿರುವ ಅತಿ ಭೀಕರ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಯೋಧರು ಧೈರ್ಯದಿಂದ ಹೋರಾಡಿದ್ದು, ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ. ಭಾರತ ಸರ್ಕಾರ ಮತ್ತು ಛತ್ತೀಸ್ಗಢ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದಿರುವ ಅವರು ನಕ್ಸಲರಿಗೆ ನೇರ ತಿರುಗೇಟು ನೀಡಿದ್ದಾರೆ. ಸಿಆರ್ಪಿಎಫ್ ಯೋಧರನ್ನುದ್ದೇಶಿಸಿ ಮಾತನಾಡಿದ ಶಾ, ನಮ್ಮ ಸ್ನೇಹಿತರನ್ನ ಕಳೆದುಕೊಂಡಾಗ ನಿಜಕ್ಕೂ ಬೇಸರವಾಗುತ್ತದೆ. ಈ ಪ್ರದೇಶದಲ್ಲಿ ನಕ್ಸಲರ ಸಮಸ್ಯೆಯಿಂದಾಗಿ ಜನರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಶರಣಾಗಲು ಬಯಸುವ ನಕ್ಸಲರಿಗೆ ಸ್ವಾಗತ. ಆದರೆ ಕೈಯಲ್ಲಿ ಗನ್ ಹಿಡಿದ್ರೆ ಖಂಡಿತವಾಗಿ ಶಸ್ತ್ರಾಸ್ತ್ರಗಳಿಂದಲೇ ಉತ್ತರ ನೀಡುತ್ತೇವೆ ಎಂದಿದ್ದಾರೆ.