ಬಿಹಾರದಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿವೆ ನದಿಗಳು... ಸಂಕಷ್ಟದಲ್ಲಿ 30,000 ಜನ! - ಮಧುಬಾನಿಯಲ್ಲಿ ಸುಮಾರು 30,000 ಜನರು ಸಂಕಷ್ಟ
🎬 Watch Now: Feature Video
ಮಧುಬಾನಿ: ನೇಪಾಳ ಮತ್ತು ಬಿಹಾರದಲ್ಲಿ ವ್ಯಾಪಕ ಮಳೆಯಿಂದ ಬಾಗಮತಿ, ಗಂಡಕ್, ಕಮಲಾ ಬಾಲನ್, ಕೋಸಿ, ಗಗನ್ ಸೇರಿದಂತೆ ಉತ್ತರ ಬಿಹಾರದ ವಿವಿಧ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳಿಂದಾಗ ಮಧುಬಾನಿಯಲ್ಲಿ ಸುಮಾರು 30,000 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದಲ್ಲಿ ನೀರಿನ ಒಳಹರಿವು ಹೆಚ್ಚಾಗಿರುವ ಕಾರಣ ಪಶ್ಚಿಮ ಚಂಪಾರಣ್ದ ವಾಲ್ಮೀಕಿನಗರ ಬ್ಯಾರೇಜ್ನ 36 ಗೇಟ್‌ಗಳ ಮೂಲಕ 4.50 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದರಿಂದ ಬಿಹಾರದಲ್ಲಿ ಹೊರ ಹರಿವು ಹೆಚ್ಚಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.