ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ನಡುರಸ್ತೆಯಲ್ಲೇ ಪುಂಡನ ಚಳಿ ಬಿಡಿಸಿದ ಲೇಡಿ ಸಿಂಗಂ
ಕಾನ್ಪುರ (ಉತ್ತರ ಪ್ರದೇಶ): ಶಾಲೆಯೊಂದರ ಬಳಿ ನಿಂತು ಹುಡುಗಿಯರನ್ನು ಚುಡಾಯಿಸುತ್ತ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನೋರ್ವನಿಗೆ ಮಹಿಳಾ ಪೇದೆವೋರ್ವರು ತಮ್ಮ ಕಾಲಲಿದ್ದ ಬೂಟ್ ತೆಗೆದು ರಸ್ತೆ ಮಧ್ಯದಲ್ಲೇ ಗೂಸಾ ನೀಡಿರುವ ಪ್ರಕರಣ ಕಾನ್ಪುರದಲ್ಲಿ ನಡೆದಿದೆ. ಕೇವಲ 33 ಸೆಕೆಂಡ್ಗಳಲ್ಲಿ 22 ಬಾರಿ ಯುವಕ ಬೂಟೇಟು ತಿಂದಿದ್ದಾನೆ. ಮಹಿಳಾ ಕಾನ್ಸ್ಟೇಬಲ್ ಧೈರ್ಯಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರೇಮ್ ಪ್ರಕಾಶ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಪಿಸಿಯ ಸೆಕ್ಷನ್ 294 ರ ಅಡಿಯಲ್ಲಿ ಬಿಥೂರ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.