ಸಿಗದ ಆನ್ಲೈನ್ ಶಿಕ್ಷಣ ಸೌಲಭ್ಯ: ಶಾಲೆಗೆ ತೆರಳಿ ಮಕ್ಕಳಿಗೆ ಪಾಠ ಮಾಡುವ ಸರ್ಕಾರಿ ಶಾಲೆ ಹೆಡ್ ಮಾಸ್ಟರ್! - ಸರ್ಕಾರಿ ಶಾಲೆ ಹೆಡ್ ಮಾಸ್ಟರ್
🎬 Watch Now: Feature Video
ಮಧುರೈ(ತಮಿಳುನಾಡು): ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ-ಪ್ರವಚನ ಮಾಡುವಂತೆ ಸರ್ಕಾರಗಳು ಈಗಾಗಲೇ ಆದೇಶ ಹೊರಡಿಸಿವೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಮಕ್ಕಳಿಗೆ ಇದರ ಸೌಲಭ್ಯ ಸಿಗುತ್ತಿಲ್ಲ.ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಮಿಳುನಾಡಿನ ಮಧುರೈನಲ್ಲೂ ಸರ್ಕಾರಿ ಮಕ್ಕಳು ಆನ್ಲೈನ್ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಸರ್ಕಾರಿ ಶಾಲೆಯ ಹೆಡ್ಮಾಸ್ಟರ್ ಶಾಲೆಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರಿಗೆ ಇತರೆ ಶಿಕ್ಷಕರು ಸಾಥ್ ನೀಡಿದ್ದಾರೆ.