ನಿತೀಶ್ ರ‍್ಯಾಲಿ ವೇಳೆ 'ಲಾಲೂ ಜಿಂದಾಬಾದ್' ಸ್ಲೋಗನ್... ಸ್ಟಾಪ್ ದಿಸ್ ನಾನ್ಸೆನ್ಸ್ ಎಂದ ಸಿಎಂ! - ಲಾಲೂ ಜಿಂದಾಬಾದ್ ಸ್ಲೋಗನ್
🎬 Watch Now: Feature Video
ಚಾಪ್ರಾ(ಬಿಹಾರ): ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿವಿಧ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ರ‍್ಯಾಲಿ ನಡೆಸುತ್ತಿದ್ದಾರೆ. ಚಾಪ್ರಾದಲ್ಲಿ ಜೆಡಿಯು ಅಭ್ಯರ್ಥಿ ಚಂದ್ರಿಕಾ ರಾಯ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಸಿಎಂ ಇರಿಸು ಮುರಿಸುಗೊಂಡಿರುವ ಘಟನೆ ನಡೆದಿದೆ. ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಭಾಷಣ ಮಾಡ್ತಿದ್ದ ವೇಳೆ ಸ್ಥಳದಲ್ಲಿ ಸೇರಿದ್ದ ಕೆಲವರು ಲಾಲೂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಟಾಪ್ ದಿಸ್ ನಾನ್ಸೆನ್ಸ್ ಎಂದು ಆಕ್ರೋಶದಲ್ಲೇ ಹೇಳಿದ್ದಾರೆ. ನೀವೂ ಏನ್ ಹೇಳ್ತಿದ್ದೀರಿ? ಆ ರೀತಿಯಾಗಿ ಕೂಗುತ್ತಿರುವವರು ನಿಮ್ಮ ಕೈ ಮೇಲೆ ಎತ್ತಿರಿ ಎಂದು ಗರಂ ಆಗಿದ್ದಾರೆ.