ಕೋಯಿಕ್ಕೋಡ್ನಿಂದ ನೇಪಾಳಕ್ಕೆ ಸೈಕಲ್ ಸವಾರಿ: ಇಂಧನ ಬೆಲೆ ಏರಿಕೆಯ ವಿರುದ್ಧ ಶಿಕ್ಷಕನ ಪ್ರತಿಭಟನೆ - physical training teacher
🎬 Watch Now: Feature Video

ಕಾಸರಗೋಡು (ಕೇರಳ): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಭಾರತದಲ್ಲಿ ಇಂಧನ ಬೆಲೆ ಇಳಿಕೆಯಾಗದಿರುವುದರ ವಿರುದ್ಧ ಕೇರಳದ ತಲಶ್ಶೇರಿ ಅಮೃತ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ತರಬೇತಿ ಶಿಕ್ಷಕನಾಗಿರುವ ಅಖಿಲೇಶ್ ಅಚು ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಸೈಕಲ್ ತುಳಿದುಕೊಂಡೇ ಕೋಯಿಕ್ಕೋಡ್ನಿಂದ ನೇಪಾಳ ಪ್ರವಾಸಕ್ಕೆ ಹೊರಟಿದ್ದಾರೆ. ಶುಕ್ರವಾರ ಕಾಸರಗೋಡು ತಲುಪಿರುವ ಅಖಿಲೇಶ್, ಇಂಧನ ಬೆಲೆ ಏರಿಕೆ ಎಂಬುದು ರಾಜಕೀಯ ಪಕ್ಷಗಳಿಗೆ ಸೀಮಿತವಾದ ವಿಚಾರವಲ್ಲ. ಇದರ ವಿರುದ್ಧ ದನಿ ಎತ್ತುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಯುವಕರಿಗೆ ರವಾನಿಸಿದ್ದಾರೆ.