ವಿಶೇಷ ಸ್ಥಾನಮಾನ ರದ್ದು: ಜಮ್ಮು-ಕಾಶ್ಮೀರ ಇಂದಿನಿಂದ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶ
🎬 Watch Now: Feature Video
ಕಳೆದೊಂದು ವಾರದ ಹಿಂದೆಯಷ್ಟೇ ಸುಮಾರು 35 ಸಾವಿರ ಭದ್ರತಾ ಸಿಬ್ಬಂದಿ ಜಮ್ಮು-ಕಾಶ್ಮೀರದಲ್ಲಿ ನಿಯೋಜಗೊಂಡಿದ್ದರ ಹಿಂದಿನ ರಹಸ್ಯ ಬಯಲಾಗಿದೆ. ದಶಕಗಳಿಂದ ಮುಂದುವರಿಸಿಕೊಂಡು ಬಂದಿದ್ದ, ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್ 370 ರದ್ದು ಮಾಡಲು ಕೇಂದ್ರ ಸರ್ಕಾರದ ಸಂಸತ್ನಲ್ಲಿ ಪ್ರಸ್ತಾವ ಮಂಡಿಸಿದೆ. ಆ ಮೂಲಕ 2014ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಬಿಜೆಪಿ ಕಡೆಗೂ ಈಡೇರಿಸಿದೆ.