ಜೂನ್ 2021ರವರೆಗೆ ಬಡವರಿಗೆ ಉಚಿತ ಪಡಿತರ: ಪ.ಬಂಗಾಳ ಸಿಎಂ ಮಹತ್ವದ ಘೋಷಣೆ - ಮಮತಾ ಬ್ಯಾನರ್ಜಿ
🎬 Watch Now: Feature Video

ಕೋಲ್ಕತ್ತಾ: ಮುಂದಿನ ವರ್ಷ ಜೂನ್ ಮುಕ್ತಾಯದವರೆಗೂ ರಾಜ್ಯದ ಬಡವರಿಗೆ ಉಚಿತವಾಗಿ ಪಡಿತರ ನೀಡಲು ನಿರ್ಧರಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗಾಗಲೇ ಮೆಟ್ರೋ ಹಾಗೂ ವಿಮಾನ ಸೇವೆ ಆರಂಭ ಮಾಡುವ ಸಲುವಾಗಿ ರಾಜ್ಯ ಕಾರ್ಯದರ್ಶಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿಸಿರುವ ಮಮತಾ, ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ. ಇದೇ ವೇಳೆ ಕೇವಲ ಚೀನಾ ಆ್ಯಪ್ ಬ್ಯಾನ್ ಮಾಡುವುದರಿಂದ ಪ್ರಯೋಜನವಿಲ್ಲ. ಬದಲಿಗೆ ಅದಕ್ಕೆ ಸೂಕ್ತ ತಿರುಗೇಟು ನೀಡಬೇಕು ಎಂದರು.