ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಕುಗ್ರಾಮ: ಆತ ತನ್ನರಸಿಯ ಆಸೆ ಹೀಗೆ ಈಡೇರಿಸಿದ! - ಉತ್ತರ ಪ್ರದೇಶದ ಅಪರೂಪದ ಮದುವೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9684162-1033-9684162-1606476141821.jpg)
ಉತ್ತರ ಪ್ರದೇಶ: ಮದುವೆಯಾದ ನೂತನ ದಂಪತಿಯ ಅಪರೂಪದ ಸನ್ನಿವೇಶಕ್ಕೆ ಉತ್ತರ ಪ್ರದೇಶದ ಹಳ್ಳಿಯೊಂದು ಸಾಕ್ಷಿಯಾಗಿದೆ. ಕೈ ಹಿಡಿದ ಹೆಂಡತಿಯನ್ನು ಹೆಲಿಕಾಪ್ಟರ್ನಲ್ಲಿ ಕರೆದುಕೊಂಡು ಬರುವ ಮೂಲಕ ಗಂಡ ತನ್ನ ಮನೆ ತುಂಬಿಸಿಕೊಂಡಿದ್ದಾನೆ. ಹೆಂಡತಿ ಮೇಲಿನ ತನ್ನ ಪ್ರೇಮವನ್ನು ಈ ರೀತಿಯಾಗಿ ತೋರ್ಪಡಿಸಿದ್ದಕ್ಕೆ ಹಳ್ಳಿಯ ಜನರೂ ಕಕ್ಕಾಬಿಕ್ಕಿಯಾಗಿದ್ದಾರೆ. ಯಾವತ್ತೂ ಹತ್ತಿರದಿಂದ ಹೆಲಿಕಾಪ್ಟರ್ ನೋಡದ ಹಳ್ಳಿಯ ಜನ ಅದರ ಸದ್ದು ಕೇಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮದುವೆ ಬಳಿಕ ತನ್ನನ್ನು ಹೀಗೆ ಕರೆದೊಯ್ಯುವಂತೆ ಮದುಮಗಳು ತನ್ನ ಆಸೆ ಹೇಳಿಕೊಂಡಿದ್ದಳಂತೆ. ಅದರಂತೆ ಮದುಮಗನು ತನ್ನ ಹೆಂಡತಿಯನ್ನು ಹೆಲಿಕಾಪ್ಟರ್ನಲ್ಲಿ ಕರೆತಂದಿದ್ದಾನೆ.