ಹೈದರಾಬಾದ್‌ನಲ್ಲಿ ಧಾರಾಕಾರ ಮಳೆ... ಜನಜೀವನ ಅಸ್ತವ್ಯಸ್ತ - hydrabad latest news
🎬 Watch Now: Feature Video

ಹೈದರಾಬಾದ್‌ನಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆ, ಕಟ್ಟಡಗಳಿಗೆ ನೀರು ನುಗ್ಗಿದೆ. ಅಲ್ಲದೆ ರಸ್ತೆಯ ಮೇಲೆ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹವಾಮಾನ ಇಲಾಖೆ ಪ್ರಕಾರ ಬಹದ್ದೂರ್‌ಪುರ 110 ಮಿ.ಮೀ., ರಾಜೇಂದ್ರನಗರದಲ್ಲಿ 105.3 ಮಿ.ಮೀ. ಮಳೆಯಾಗಿದೆ. ಶೇಕ್‌ಪೇಟೆ, ಬಹದ್ದೂರ್‌ಪುರ, ಸೆರಿಲಿಂಗಂಪಲ್ಲಿ, ಖೈರತಾಬಾದ್, ಆಸಿಫ್‌ನಗರ, ಬಂಡಲಗುಡ, ಚಾರ್ಮಿನಾರ್ ಮತ್ತು ಉಪ್ಪಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 90 ಮಿ.ಮೀ. ಮಳೆಯಾಗಿದೆ.