ಬಿರಿಯಾನಿ ಮಾರಾಟ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ: ವಿಡಿಯೋ - ಉತ್ತರ ಪ್ರದೇಶ ಅಪರಾಧ ಸುದ್ದಿ
🎬 Watch Now: Feature Video

ಗ್ರೇಟರ್ ನೋಯ್ಡಾ: ಬಿರಿಯಾನಿ ಮಾರುತ್ತಿದ್ದ ದಲಿತ ಯುವಕನ್ನು ಮೇಲ್ಜಾತಿಗೆ ಸೇರಿದ ಯುವಕರು ಹಲ್ಲೆ ನಡೆಸಿರುವ ಘಟನೆ ಗ್ರೇಟರ್ ನೋಯ್ಡಾದ ರಬಾಪುರದಲ್ಲಿ ನಡೆದಿದೆ. 43 ವರ್ಷದ ಲೋಕೇಶ್ ಹಲ್ಲೆಗೊಳಗಾದ ದಲಿತ ಯುವಕ. ಯುವಕರು ಹಲ್ಲೆ ನಡೆಸುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಅದರಲ್ಲಿ ಜಾತಿ ಸೂಚಕ ಪದಗಳನ್ನು ಬಳಸಿ ಅವಾಚ್ಯವಾಗಿ ಬೈದಿದ್ದಾರೆ ಎಂದು ತಿಳಿದುಬಂದಿದೆ.