ಪಾಪ್ ಲೋಕದ ದೊರೆಗೆ ಸಾಂಗ್ಲಿಯ ಲೇಡಿ ಮೈಕಲ್ ಜಾಕ್ಸನ್ ಗೌರವ - ಕಿರಣ್ ಹೋಲ್ಕಾರ್
🎬 Watch Now: Feature Video
'ಪಾಪ್ ಲೋಕದ ದೊರೆ' ಎಂದೇ ಪ್ರಸಿದ್ಧರಾಗಿದ್ದ ಗಾಯಕ ಮತ್ತು ಡಾನ್ಸರ್ ಮೈಕಲ್ ಜಾಕ್ಸನ್ ನಮ್ಮನ್ನಗಲಿ 11 ವರ್ಷಗಳು ಸಂದಿವೆ. ಆಗಸ್ಟ್ 29 ಅವರ ಜನ್ಮ ದಿನವಾಗಿದ್ದು, ಜಾಕ್ಸನ್ಗೆ ಸ್ಮರಣಾರ್ಥವಾಗಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಯುವತಿಯೋರ್ವಳು ನೃತ್ಯ ಕಾರ್ಯಕ್ರಮ ನೀಡಿದ್ದಾಳೆ. ಸಾಂಗ್ಲಿಯ ಪತ್ರಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿರಣ್ ಹೋಲ್ಕಾರ್ ಎಂಬ ಯುವತಿ ಸತತ 2 ಗಂಟೆಗಳ ಕಾಲ ಮೈಕಲ್ ಜಾಕ್ಸನ್ರ ಹಾಡುಗಳಿಗೆ ಅವರಂತೆಯೇ ಹೆಜ್ಜೆ ಹಾಕಿದ್ದಾಳೆ. ಈಕೆ ಮೈಕಲ್ ಜಾಕ್ಸನ್ರ ದೊಡ್ಡ ಅಭಿಮಾನಿಯಾಗಿದ್ದಾಳೆ.