ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಯುವತಿಯರ ಸ್ಟಂಟ್: ವಿಡಿಯೋ ವೈರಲ್ - ಎನ್ಫೀಲ್ಡ್ ಬೈಕ್ ಮೇಲೆ ಯುವತಿಯರ ಸ್ಟಂಟ್
🎬 Watch Now: Feature Video
ಗಾಜಿಯಾಬಾದ್: ಯುವತಿಯರಿಬ್ಬರು ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಸ್ಟಂಟ್ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರು ಕುಳಿತುಕೊಂಡು ಬೈಕ್ ಚಲಾಯಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ಇಬ್ಬರು ಮಹಿಳೆಯರು ಹೆಲ್ಮೆಟ್ ಸಹ ಹಾಕಿಕೊಂಡಿಲ್ಲ. ಟ್ರಾಫಿಕ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.