ರಾಮ ಮಂದಿರ ನಿರ್ಮಾಣಕ್ಕಾಗಿ ಈವರೆಗೆ 1,511 ಕೋಟಿ ರೂ.ಗಳ ನಿಧಿ ಸ್ವೀಕಾರ: ಗೋವಿಂದ್ದೇವ್ಜಿ ಮಹಾರಾಜ್ - ರಾಮ ಮಂದಿರ ನಿರ್ಮಾಣಕ್ಕಾಗಿ 1511 ಕೋಟಿ ರೂ.ಗಳ ನಿಧಿ
🎬 Watch Now: Feature Video
ಗಾಂಧಿನಗರ( ಗುಜರಾತ್): ಈವರೆಗೆ ರಾಮ ಮಂದಿರ ನಿರ್ಮಾಣಕ್ಕಾಗಿ 1511 ಕೋಟಿ ರೂ.ಗಳ ನಿಧಿಯನ್ನು ಸ್ವೀಕರಿಸಲಾಗಿದೆ ಎಂದು ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ಖಜಾಂಚಿ ಗೋವಿಂದ್ದೇವ್ಜಿ ಮಹಾರಾಜ್ ಹೇಳಿದ್ದಾರೆ. ಜನರು ರಾಮ ದೇವಾಲಯ ನಿರ್ಮಾಣಕ್ಕೆ ಸಹಕರಿಸುತ್ತಿದ್ದಾರೆ. ನಾವು ಮಂದಿರದ ಸುತ್ತಮುತ್ತಲಿನ ಭೂಮಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೇವೆ. ಮತ್ತು ಜಾಗತಿಕ ಮಟ್ಟದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗುವುದು. ಎರಡು ಹಂತಗಳಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು. ದೇವಾಲಯದ ಸುತ್ತಮುತ್ತಲಿನ ಸ್ಥಳಗಳ ಅಭಿವೃದ್ಧಿ ಕಾರ್ಯ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.