ವೀಕ್ಷಿಸಿ: ಹಿಮ ಹೊದ್ದು ಶ್ವೇತವರ್ಣಮಯವಾದ ಹಿಮಾಚಲ
🎬 Watch Now: Feature Video
ಕುಲ್ಲು(ಹಿಮಾಚಲ ಪ್ರದೇಶ): ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಹಿಮಮಳೆ ಸುರಿಯುತ್ತಿದೆ. ಮನೆಗಳು, ರಸ್ತೆಗಳು, ವಾಹನಗಳು ಸೇರಿದಂತೆ ಎಲ್ಲವೂ ಹಿಮಾವೃತವಾಗಿವೆ. ಪ್ರವಾಸಿಗರ ನೆಚ್ಚಿನ ಅಟಲ್ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ. ಮನಾಲಿ-ಕೀಲಾಂಗ್ ರಸ್ತೆಯಲ್ಲಿ ಸಣ್ಣ ರೈಲುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಲಾಹೌಲ್-ಸ್ಪಿತಿಯಲ್ಲಿ ಹಿಮಪಾತದಿಂದಾಗಿ ಕುಲ್ಲು ಕಣಿವೆಯಲ್ಲಿ ಮೈ ಕೊರೆಯುವ ಚಳಿ ಇದೆ. ಕುಲ್ಲು ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿಯೂ ಹಿಮಮಳೆಯಾಗಿದೆ. ಪ್ರವಾಸೋದ್ಯಮ ನಗರ ಮನಾಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮಪಾತ ಹೆಚ್ಚುತ್ತಿರುವ ಕಾರಣ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಯಾರೂ ಕೂಡಾ ಎತ್ತರದ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ತಿಳಿಸಿದೆ.
Last Updated : Apr 7, 2021, 1:38 PM IST